Tuesday, November 5, 2019

ಭತ್ತದ ಗದ್ದೆಯ ಗಣಪ


ಎರಡು ಬಣ್ಣದ ಪೈರುಗಳ ಜಾಣ ಸಂಯೋಜನೆಯಿಂದ ಹೇಗೆ ಗದ್ದೆ ಗಣಪ ಮೂಡಿದ್ದಾರೆ ನೋಡಿ.
 ಸಾಮಾಜಿಕ ಮಾಧ್ಯಮದ ಮೂಲಕ ಮರು ರವಾನೆಯಾಗಿ ಬಂದ ಈ ಕಲೆ ಎಲ್ಲಿಯದು?
 ಕಲಾವಿದರು ಯಾರು? ಗೊತ್ತಿದ್ದರೆ ತಿಳಿಸಿ.

ಸಾವಯವ ಸೌತೆಯ ಏಟಿವಿ

ಪ್ರದೇಪ್ ಸೂರಿ ಅವರ ಸಾವಯವ ಸೌತೆಯ ಏಟಿವಿ. 
ಎನಿ ಟೈಮ್ ವೆಜಿಟೇಬಲ್ ಬ್ಯಾಂಕ್

ಹಾರೆಕುಮಾರ್ ಮತ್ತು ಪೂಂಕೊಟ್ಟು ಕುಮಾರಿ

ಅದು ಹೇಗೆ ಇಂಥ ಅನಾಕರ್ಷಕ ವಸ್ತುಗಳಲ್ಲೂ ಇವರು ಜೀವ, ಆಕರ್ಷಣೆ ಕಾಣುತ್ತಾರೋ ಏನೋ.. ಕಲಾವಿದನ ಒಳಗಣ್ಣು ಕಂಡ ಅದೇ ಭಂಗಿಯಲ್ಲಿ ಉಪಕರಣಗಳನ್ನಿಟ್ಟಾಗ ಮೂಡಿದ ಫಲಿತಾಂಶ ಹೇಗಿದೆ ನೋಡಿ.

ಕೃಪೆ : ಜಾಲತಾಣ

ಅದೆಷ್ಟು ಲೇಖನಗಳಿಗೆ ನೀರಿನ ಸಂಬಂಧ!



  ತೆರೆಮರೆ -------------------
 
ಕಾಸರಗೋಡಿನ ನಿವೃತ್ತ ಅಧಿಕಾರಿ ಒಬ್ಬರು ಒಂದು ಕೋಟಿ ಲೀಟರಿನ ಮಳೆಕೊಳ ನಿರ್ಮಿಸಿದ ಸುದ್ದಿ ಬಂತು. ಉದ್ದಿಮೆಗಾಗಿ ಮಾಡಿದ ಹತ್ತು ಕೋಟಿಗಿಂತ ದೊಡ್ಡ ಮಳೆನೀರ ಟಾಂಕಿಯೂ ಕೇರಳದಲ್ಲಿದೆ. ಆದರೆ ಕೃಷಿ ಉದ್ದೇಶಕ್ಕೆ ಬಹುಶಃ ರಾಜ್ಯದಲ್ಲೇ ಇದು ದೊಡ್ಡದು. ಸಹಜವಾಗಿಯೇ ಕುತೂಹಲ ಕೆರಳಿತು.
ನಮ್ಮೂರ ನಾಲ್ಕು ಜನ ಇದನ್ನು ನೋಡಲು ಹೋದೆವು. ಹೋಗುವ ಮುನ್ನ ಹೋಮ್ ವರ್ಕ್ ಮಾಡುವುದು ನಮ್ಮ ರೂಢಿ. ಹಾಗೆ ವಿವರ ಕೇಳುತ್ತಾ ಹೋದಾಗ ಅದೇ ರೂಟಿನಲ್ಲಿ ಇನ್ನೆರಡು ಮಳೆನೀರ ಟಾಂಕಿ - ಮೂರು ಮತ್ತು ಹತ್ತು ಲಕ್ಷದ್ದು ಮಾಡಿದವರ ಬಗ್ಗೆ ತಿಳಿಯಿತು. ಈ ಮೂರೂ ಟಾಂಕಿಗಳ ಕತೆಯೇ ಈ ಬಾರಿಯ ಪ್ರಥಮ ಮುಖಪುಟ ಲೇಖನ.
ಇದಾದ ವಾರಗಳಲ್ಲೇ ಒಂದೂವರೆ ಎಕರೆ ಜಾಗದಲ್ಲಿ ಅನಿವಾರ್ಯವಾಗಿ ಮಳೆನೀರಿನಿಂದಲೇ ಕೃಷಿ ಮಾಡಿ ಗೆದ್ದ ರಾಜಪುರಂನ ಜಾರ್ಜ್ ಬಗ್ಗೆ ಸುದ್ದಿ ಸಿಕ್ಕಿತು. ಅಪ್ಪ - ಮಗ ಇಬ್ಬರೂ ಸೇರಿ ಎಷ್ಟೊಂದು ಕೃಷಿ - ಉಪಕಸುಬು ಮಾಡುತ್ತಿದ್ದಾರೆ ನೋಡಿ. ಇವರ ಮುಖ್ಯ ಆದಾಯದ ಮೂಲವಾದ ಕವುಜುಗ ಸಾಕಣೆಯೂ ಪರಿಶೀಲನಾರ್ಹ ಉಪಕಸುಬು - ಅವರವರ ಊರಿನಲ್ಲಿ ಈ ಮೊಟ್ಟೆಗೆ ಬೇಡಿಕೆ ಇದ್ದರೆ.
ಇದಾದ ದಿವಸಗಳಲ್ಲಿ ತಗೊಳ್ಳಿ, ತೊಡುಪುಳದಲ್ಲಿ ಬಂಡೆಗುಡ್ಡದಿಂದ ಮಳೆನೀರು ಹಿಡಿಯುವ ಉತ್ಸಾಹಿಯೊಬ್ಬರ ಸುದ್ದಿ ಬಂತು. ಬಿಜು ಥಾಮಸ್. ನಮ್ಮಲ್ಲೂ ಕಾರ್ಕಳದ ಕಡೆ ಜಮೀನಿನ ಪಕ್ಕವೇ ಇಂಥ ಬಂಡೆ ಇರುವವರಿರಬಹುದು. ಯಾರಿಗಾದರೂ ಹೊಸ ಐಡಿಯಾ ಬರುವುದಿದ್ದರೆ ಬರಲಿ ಅಂತ ಬಿಜು ಅವರ ಹೂವನ್ನೂ ಈ ಬಾರಿಯ ಮುಖಪುಟ ಲೇಖನದ ಮಾಲೆಯಲ್ಲಿ ಸೇರಿಸಿದ್ದೇವೆ.
ಈ ಥರದ ಟಾಂಕಿಗಳಲ್ಲಿ ಬೇರೆಬೇರೆಯವರಿಗೆ ಬೇರೆಬೇರೆ ರೀತಿಯವು ಅಗತ್ಯವಿದೆ. ಫೆರೋಸಿಮೆಂಟಿನಿಂದ ಮಿತ ವೆಚ್ಚದಲ್ಲಿ ಟಾಂಕಿ ಮಾಡಿದ ಸುದ್ದಿ ಇತ್ತು. ಪತ್ರಿಕೆ ಅಚ್ಚಿಗೆ  ಹೋಗುವ ಎರಡು ದಿನ ಹಿಂದೆ ವಯನಾಡಿನ ದೇವದಾಸ್ ಅವರಿಂದ ಈ ಬಗ್ಗೆ ಸ್ವಲ್ಪ ವಿವರ ಬಂದಿದೆ. ಹೆಚ್ಚಿನ ಮಾಹಿತಿ ಮುಂದಿನ ಯಾವುದಾದರೂ ಸಂಚಿಕೆಯಲ್ಲಿ.
ಕರಿಯಾಲ ಹರಿವೆಯನ್ನು ದಶಕದ ಹಿಂದೆ ಪರಿಚಯಿಸಿದ್ದೆವು. ಆದರೆ ಇದರ ಸಂರಕ್ಷಣೆಯ ಪ್ರಜ್ಞೆ ಬಿತ್ತಲು ಇನ್ನೊಮ್ಮೆ ಫಾಲೋ-ಅಪ್ ಮಾಡುವ ಅಗತ್ಯವಿದೆ ಅನಿಸಿತು. ನಮ್ಮ ಅಪ ಬಳಗ ಈ ಫಾಲೋ ಅಪ್ ಲೇಖನ ಬರೆದಿದೆ. ಕಾರಂತರು ಈ ಪ್ರವಾಹದ ಸಂಕಟಸ್ಥಿತಿಯಲ್ಲಿ ಮಾಸ್ಟರ್ ಪ್ಲಾನರಿ ಒಂದೇ ದಿನದಲ್ಲಿ ಮಾಡಿಕೊಟ್ಟ ಸೇತುವೆಯ ಬಗ್ಗೆ ಮತ್ತು ಕೆರೆಕೆಲಸದಲ್ಲಿ ನಿಪುಣರಾಗಿದ್ದು ಸಕಾಲದಲ್ಲಿ ಅದನ್ನು ಮುಗಿಸಿಕೊಡುವ ಮಣ್ಣು ವಡ್ಡರ ಒಂದು ತಂಡದ ಬಗ್ಗೆ ಲೇಖನ ಬರೆದಿದ್ದಾರೆ.

ಇದು ಈ ಸಂಚಿಕೆ ರೂಪುಗೊಂಡಿದ್ದರ
ನೇಪಥ್ಯದ ಕತೆ