Tuesday, November 5, 2019

ಕೆರೆಬಾವಿ ಶುಚೀಕರಣಕ್ಕೆ ‘ಲಾವಂಚದ ತೆಪ್ಪ’





ನಾವೇ ಸುಲಭವಾಗಿ ಕೆರೆ-ಬಾವಿಗಳಲ್ಲಿ ಬೆಳೆದು ಸಮಸ್ಯೆಯೊಡ್ಡುವ ಪಾಚಿಯ ಸಮಸ್ಯೆಯನ್ನು ನಿವಾರಿಸಬಹುದು.

ಲೇ: ಶ್ರೀ   ||    ಚಿತ್ರಗಳು: ನಿಟಿಲೆ 




ಕೆರೆ-ಬಾವಿಗಳಲ್ಲಿ ಕೆಲವೊಮ್ಮೆ ಪಾಚಿ ಬೆಳೆದು ಸಮಸ್ಯೆ ಒಡ್ಡುವುದಿದೆ. ಬಹುಕಾಲ ಬಳಸದೆ ಉಳಿಸಿದ ನೀರು ಕಬ್ಬಿನ ಹಾಲಿನ ಬಣ್ಣ ತಳೆದು ಹಸಿರಾಗಿ ಕಾಣಿಸುತ್ತದೆ. ಗದ್ದೆ-ಹೊಲಗಳಿಗೆ ಉಣಿಸಿದ ಸಾರಜನಕ ಗೊಬ್ಬರಯುಕ್ತ ನೀರು ಊಜುವಲ್ಲಿ ಈ ಸಮಸ್ಯೆ ಅಧಿಕ.
ಲಾವಂಚ ಅಥವಾ ರಾಮಚ್ಚ (ವೆಟಿವರ್) ಗೊತ್ತಲ್ಲಾ? ಹಲವೆಡೆ ಬಿಸಿನೀರು ಕಾಯಿಸುವಾಗ ಇದರ ಬೇರನ್ನೂ ಸುವಾಸನೆಗಾಗಿ ಹಾಕುವುದಿದೆ. ಅದು ದೇಹಕ್ಕೂ ತಂಪನ್ನೊದಗಿಸುತ್ತದೆ. ಈ ಗಿಡದ ತೆಪ್ಪ ತಯಾರಿಸಿ ಇಂಥ ಕೆರೆ-ಬಾವಿಗಳಲ್ಲಿ ತೇಲಿಬಿಟ್ಟರೆ ಈ ಪಾಚಿಯ ಸಮಸ್ಯೆ ಪರಿಹರಿಸಬಹುದು. ಈ ಮಾಹಿತಿಯನ್ನು ಮೊದಲು ಜಗತ್ತಿಗೆ ಒದಗಿಸಿದ್ದು ವಿಶ್ವ ಬ್ಯಾಂಕಿನ ವೆಟಿವರ್ ನೆಟ್ ವರ್ಕ್  (https://www.vetiver.org/).
ಲಾವಂಚ ಗಿಡ ಹಲವು ರೀತಿಗಳಲ್ಲಿ ಕೃಷಿಕರಿಗೆ ಉಪಯುಕ್ತ. ಅದರ ಬೇರು ತುಂಬ ಬಲವಾದದ್ದು, ಸಡಿಲ ಮಣ್ಣಿನಲ್ಲಿ ತುಂಬ ಆಳಕ್ಕೆ ಹೋಗುತ್ತದೆ. ಈ ಗಿಡವನ್ನು ಕಂಟೂರ್ ಸಾಲಿನಲ್ಲಿ ನೆಟ್ಟರೆ, ಮಣ್ಣಿನ ಸವಕಳಿ ಮತ್ತು ಮಳೆನೀರಿನ ಓಟವನ್ನು ಒಂದು ಪರಿಧಿಯ ವರೆಗೆ ತಡೆಯಬಲ್ಲುದು. ಭೂಕುಸಿತ ತಡೆಯಲು ಇದು ಉಪಕಾರಿ. ಹೊಸ ಮಣ್ಣು  ಪೇರಿಸಿ ರಸ್ತೆ ಮಾಡಿದಲ್ಲಿ ಅಂಚುಗಳು ಕುಸಿದು / ಕರಗಿ ಹೋಗದಂತೆ ತಡೆಯಲು ಇದನ್ನು ವ್ಯಾಪಕವಾಗಿ ಬಳಸುತ್ತಾರೆ.
ಈ ಗಿಡ ಮಲೆನಾಡು - ಬಯಲುಸೀಮೆ ಎಲ್ಲೆಡೆ ಬದುಕಬಲ್ಲುದು. ಬಯಲುಸೀಮೆಯಲ್ಲಿ ಬೇಸಿಗೆಯಲ್ಲಿ ಇದರ ಎಲೆಗಳು ಒಣಗಿಹೋಗುತ್ತವೆ, ಮತ್ತೆ ಮಳೆ ಬಂದಾಗ ಚಿಗುರುತ್ತದೆ. ನಮ್ಮದೇ ದೇಶದ ಮೂಲದ ಈ ಗಿಡವನ್ನು ನೆಲಜಲ ಮತ್ತು ಪರಿಸರ ಸಂರಕ್ಷಣೆಗಾಗಿ ನಾವು ಬಳಸಿಕೊಂಡದ್ದು, ಪರಿಚಯ ಮಾಡಿಕೊಂಡದ್ದು ಬಹು ಕಡಿಮೆ!
ಈ ಗಿಡ ಮಣ್ಣಿನಲ್ಲೂ, ನೀರಿನಲ್ಲೂ - ಎರಡೂ ಕಡೆ ಬದುಕುವ ಸಾಮರ್ಥ್ಯ ಹೊಂದಿದೆ. ಪಾಚಿ ಮತ್ತು ಕೊಳಕು ತುಂಬಿದ ನೀರನ್ನು ಶುಚಿಗೊಳಿಸುವ ಶಕ್ತಿ ಇದಕ್ಕಿದೆ ಎಂದು ತಿಳಿದು ಬಂದದ್ದು ವೆಟಿವರ್ ನೆಟ್ ವರ್ಕಿನ ಸಂಶೋಧನೆಯಿಂದ.
ಈ ಉದ್ದೇಶಕ್ಕೆ ಲಾವಂಚ ಗಿಡವನ್ನು ನೀರಿನಲ್ಲಿ ಬೆಳೆಸಿದರೆ ಸಾಕು. ಆದರೆ ರಾಮಚ್ಚ ಗಿಡವನ್ನು ನೀರಿನಲ್ಲಿ ಹೇಗೆ ಬೆಳೆಸುತ್ತೀರಿ? ಇದಕ್ಕಾಗಿ ಒಂದು ತೆಪ್ಪ ತಯಾರಿಸಿಕೊಳ್ಳಬೇಕು. ಆ ತೆಪ್ಪದ ನಡುವೆ ಗಿಡಗಳನ್ನು ಸಿಕ್ಕಿಸಿ ತೇಲಿಬಿಡಬೇಕು.


 ಲೇಖನದ ಪೂರ್ಣ ಪಾಠ ಜಾಲತಾಣದಲ್ಲಿದೆ : www.adikepatrike.com

 

No comments:

Post a Comment